ವೈರಸ್ (ವೈರಾಣು) ಒಂದು ಸಣ್ಣ ನಿರ್ಜೀವ ಜೀವಿ. ಇದು ಬ್ಯಾಕ್ಟೀರಿಯ, ಸಸ್ಯಗಳು ಹಾಗೂ ಪ್ರಾಣಿಗಳಿಗೆ ಸೋಂಕಾಗಿ ತಗುಲಬಹುದು. ಈ ಮೂಲಕ ಹಲವು ರೋಗಗಳನ್ನು ಉಂಟುಮಾಡಬಹುದು ಮತ್ತು ಕೆಲವೊಮ್ಮೆ ಈ ಜೀವಿಗಳ ಸಾವಿಗೂ ಕಾರಣವಾಗಬಹುದು. ವೈರಸ್ಗಳೊಳಗೆ ಮನುಷ್ಯ ಶರೀರದಲ್ಲಿರುವಂತೆ ಜೀವಕೋಶಗಳಿರುವುದಿಲ್ಲ. ಹೀಗಾಗಿ ಅವುಗಳ ಬೆಳವಣಿಗೆಗೆ ಅವು ಪೋಷಕ ಜೀವಕೋಶವೊಂದನ್ನು ಹುಡುಕಿಕೊಳ್ಳಬೇಕು. ಬಹುತೇಕ ವೈರಸ್ಗಳು ಈ ಮೂರು ಭಾಗಗಳನ್ನು ಹೊಂದಿರುತ್ತವೆ – ವೈರಸ್ನ ಕುರಿತು ಮಾಹಿತಿ ಹೊಂದಿರುವ ಒಂದು ರಾಸಾಯನಿಕ ರಚನೆ, ರಕ್ಷಾ ಸುತ್ತುವರಿ ಮತ್ತು ಹೊರಪದರ. ಜೀವಿಗಳಿಗಿಂತ ಇದು ಭಿನ್ನವಾಗಿದ್ದು, ವೈರಸ್ ಮತ್ತು ಜೀವಿಗಳ ನಡುವಿನ ಒಂದೇ ಸಾಮಾನ್ಯ ಅಂಶ ಎಂದರೆ ಜೀನ್ಗಳ ಕುರಿತ ಜೆನೆಟಿಕ್ ಮಾಹಿತಿಯನ್ನು ಹೊಂದಿರುವ ರಾಸಾಯನಿಕ ರಚನೆಗಳನ್ನು ಹೊಂದಿರುವುದು (ಜೀವಿಗಳಲ್ಲಿ ಡಿಎನ್ಎ ಮತ್ತು ಆರ್ಎನ್ಎ, ವೈರಸ್ನಲ್ಲಿ ಆರ್ಎನ್ಎ). ಪ್ರತಿಕೃತಿಗಳಾಗುವುದಕ್ಕಾಗಿ ವೈರಸ್ ಮೊದಲು ಒಂದು ಜೀವಿಯ ಜೀವಕೋಶವನ್ನು ಪ್ರವೇಶಿಸುತ್ತದೆ ಮತ್ತು ಜೀವಕೋಶದ ಯಾಂತ್ರಿಕ ವ್ಯವಸ್ಥೆಯನ್ನು ವಶಕ್ಕೊಳಪಡಿಸಿಕೊಳ್ಳುತ್ತದೆ. ತದನಂತರ ವೈರಸ್ ಜೀವಕೋಶದೊಳಗೆ ಹಲವು ಪ್ರತಿಕೃತಿಗಳನ್ನು ರಚಿಸುತ್ತದೆ. ಪ್ರತಿಕೃತಿಯಾದನಂತರೆ, ಜೀವಕೋಶವು ಸಿಡಿಯುತ್ತದೆ ಮತ್ತು ವೈರಸ್ ಕಣಗಳು ಇನ್ನೊಂದು ಜೀವಕೋಶವನ್ನು ಪ್ರವೇಶಿಸುತ್ತವೆ. ಕೆಲವೊಮ್ಮೆ ಹಲವು ಪ್ರತಿಕೃತಿಗಳನ್ನು ರಚಿಸುವ ಸಮಯದಲ್ಲಿ ರಾಸಾಯನಿಕ ರಚನೆಯಲ್ಲಿರುವ ಮಾಹಿತಿ ಬದಲಾಗಬಹುದು, ಇದನ್ನು ಮ್ಯುಟೇಶನ್ ಅಥವಾ ವ್ಯತ್ಯಯನ ಎಂದು ಕರೆಯಲಾಗುತ್ತದೆ. ಹೀಗಾದಲ್ಲಿ ಚಿಕಿತ್ಸೆಯೊಂದನ್ನು ಕಂಡುಹಿಡಿಯುವುದು ಕಠಿಣವಾಗಬಹುದು. ಸಾರ್ಸ್, ಶೀತಜ್ವರದ ವೈರಸ್ ಮತ್ತು ಎನ್-ಸಿಒವಿಐಡಿ ೧೯ (ಕೊರೊನ) ಮನುಷ್ಯರ ಮೇಲೆ ಸೋಂಕಾಗುವ ಕೆಲವು ವೈರಸ್ಗಳಾಗಿವೆ. ಇತ್ತೀಚಿನ ಎನ್-ಸಿಒವಿಐಡಿ ೧೯ ವೈರಸ್ ಹಿಂದೆ ಪ್ರಾಣಿಗಳ ಮೇಲೆ ಮಾತ್ರ ಪರಿಣಾಮ ಹೊಂದಿತ್ತು. ಮನುಷ್ಯರಿಗೆ ಸೋಂಕು ತಗಲಿದ್ದು ಮೊದಲ ಬಾರಿಗೆ ಚೈನಾದ ವುಹಾನ್ನಲ್ಲಿ ವರದಿಯಾಯಿತು. ಯಾವ ಪ್ರಾಣಿಯಿಂದ ಮನುಷ್ಯರಿಗೆ ವೈರಸ್ ಹೇಗೆ ವರ್ಗಾವಣೆ ಆಯಿತೆನ್ನುವುದು ಇನ್ನೂ ತಿಳಿದಿಲ್ಲ.
ವೈರಸ್: ಏನಿದು?
