ಕೊರೊನ ವೈರಸ್ ಅಥವಾ ಎನ್-ಸಿಒವಿಐಡಿ ೧೯ ಮನುಷ್ಯ ದೇಹದ ಉಸಿರಾಟದ ವ್ಯವಸ್ಥೆಯ ಮೇಲೆ ಪ್ರಭಾವ ಬೀರುವ ಸೋಂಕಾಗಿದೆ. ಸೊಳ್ಳೆಗಳು ಡೆಂಗೆ ಮತ್ತು ಚಿಕನ್ಗುನ್ಯದಂತಹ ಹಲವು ರೋಗಗಳನ್ನು ಹರಡುತ್ತವೆಯಾದರೂ ಅವು ಕೊರೊನ ವೈರಸ್ ಅನ್ನು ಹರಡುವುದಿಲ್ಲ. ಕೊರೊನ ಸೋಂಕು ತಗುಲಿದ ವ್ಯಕ್ತಿಯನ್ನು ಕಡಿಯುವ ಸೊಳ್ಳೆಗಳಿಗೆ ಅದನ್ನು ಹೊಂದಿ ಬೇರೆ ಪ್ರಾಣಿಗಳಿಗೆ ಅಥವಾ ಮನುಷ್ಯರಿಗೆ ಹರಡುವ ಸಾಮರ್ಥ್ಯವಿಲ್ಲ. ಕೊರೊನ ವೈರಸ್ ಸೋಂಕು ತಗುಲಿದವರ ಸಿಂಬಳ, ಎಂಜಲು, ಅಥವಾ ಕೆಮ್ಮು ಮತ್ತು ಸೀನಿನಿಂದ ಹನಿಗಳ ರೂಪದಲ್ಲಿ ಹರಡುತ್ತದೆ. ಸೊಳ್ಳೆಗಳಿಂದ ಈ ವೈರಸ್ ಹರಡುತ್ತದೆ ಎನ್ನುವುದಕ್ಕೆ ಇವತ್ತಿನವರೆಗೆ ಯಾವುದೇ ಪುರಾವೆಗಳಿಲ್ಲ. ನಿಮ್ಮನ್ನು ಸೋಂಕಿನಿಂದ ರಕ್ಷಿಸಿಕೊಳ್ಳಲು ಸೋಂಕು ತಗುಲಿದ ಯಾವುದೇ ವ್ಯಕ್ತಿಯಿಂದ ದೂರವಿರುವಂತೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ. ಈ ರೋಗದಿಂದ ಬಳಲುತ್ತಿರುವವರು ಅಥವಾ ಇದರ ಲಕ್ಷಣಗಳನ್ನು ಹೊಂದಿರುವವರೊಡನೆ ಹತ್ತಿರದ ಒಡನಾಟವಾಗದಂತೆ ನೋಡಿಕೊಳ್ಳುವುದನ್ನು ಸಾಮಾಜಿಕ ಅಂತರ ಎನ್ನಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಕೆಲವು ಸಾಮಾನ್ಯವಾಗಿ ಕಂಡುಬರುವ ರೋಗಲಕ್ಷಣಗಳೆಂದರೆ ಒಣ ಕೆಮ್ಮು, ಜ್ವರ ಮತ್ತು ದಣಿಯುವಿಕೆ.