Kannada

ಮಾನಸಿಕ ಅಸ್ವಸ್ಥತೆ/ಆರೋಗ್ಯ ಬಗೆಗಿನ ಮಿಥ್ಯಗಳು/ಸುಳ್ಳುಗಳು

ಮಾನಸಿಕ ಆರೋಗ್ಯ ಸಮಸ್ಯೆಗಳು ಕಡಿಮೆ ಬುದ್ಧಿಮತ್ತೆಯನ್ನು ಸೂಚಿಸುತ್ತವೆ ಮಾನಸಿಕ ಆರೋಗ್ಯ ಸಮಸ್ಯೆಗಳಿರುವವರು ಕಡಿಮೆ ಬುದ್ಧಿವಂತಿಕೆಯನ್ನು ಹೊಂದಿರುತ್ತಾರೆ/ಬುದ್ಧಿಮಾಂದ್ಯರಾಗಿರುತ್ತಾರೆ  ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಮಾನಸಿಕ ಅಸ್ವಸ್ಥತೆಯು ಬೌದ್ಧಿಕ, ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿಯನ್ನು ಅನುಸರಿಸಿ ಬರುವಿದಿಲ್ಲ. ಮಾನಸಿಕ ಅಸ್ವಸ್ಥತೆಯು ಯಾರನ್ನಾದರೂ ಕಾಡಬಹುದು. ಮಾನಸಿಕ ಆರೋಗ್ಯ ಸಮಸ್ಯೆಗಳು ವ್ಯಕ್ತಿಯ ದೌರ್ಬಲ್ಯದ ಸಂಕೇತವಾಗಿದೆ ಮಾನಸಿಕ ಅಸ್ವಸ್ಥತೆಯು ದುರ್ಬಲತೆ ಅಥವಾ ಸೋಮಾರಿತನದ ಸಂಕೇತವಲ್ಲ. ವ್ಯಕ್ತಿಯ ಬಾಲ್ಯದಲ್ಲಿ ನಡೆದ ಘಟನೆಗಳು ಅಥವಾ ದೈನಂದಿನ ಒತ್ತಡಗಳು  ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ಇರುತ್ತದೆ. ಮಾನಸಿಕ … Continue reading “ಮಾನಸಿಕ ಅಸ್ವಸ್ಥತೆ/ಆರೋಗ್ಯ ಬಗೆಗಿನ ಮಿಥ್ಯಗಳು/ಸುಳ್ಳುಗಳು”

ಮುಟ್ಟಿನ ಬಗೆಗಿನ ಕಟ್ಟುಕತೆಗಳು

ಅನೇಕ ಜನಾಂಗಗಳಲ್ಲಿ, ಇಂದಿಗೂ ಮುಟ್ಟು ಒಂದು ಅನಿಷ್ಟ, ಕೀಳು ಎಂದೇ ಭಾವಿಸುತ್ತಾರೆ. ಇದಕ್ಕೆ ಮುಖ್ಯ ಕಾರಣ ಮುಟ್ಟಿನ ಬಗೆಗಿನ ಕಟ್ಟುಕತೆಗಳು. ಮುಟ್ಟಿನ ಬಗೆಗಿನ ಸುಳ್ಳುಗಳನ್ನು ಬಯಲು ಮಾಡಲು ಈ ಕಟ್ಟುಕತೆಗಳ ಮೂಲವನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ. ಮುಟ್ಟಿನ ಬಗೆಗೆ ಸಾಮಾನ್ಯವಾಗಿ ಹಬ್ಬಿರುವ ಮೂರು ಕಟ್ಟುಕತೆಗಳ ನಿಜವನ್ನು ಈ ಕೆಳಗೆ ಬಯಲು ಮಾಡಿದೆ. ಹಿಂದಿನ ಕಾಲದಿಂದಲೂ ಮತ್ತು ಇಂದಿಗೂ ಮುಟ್ಟಿನ ರಕ್ತವನ್ನು ಅಶುದ್ದ ಅಥವಾ ಹೊಲಸು ಎಂದೇ ಹೇಳುತ್ತಾರೆ. ಆದರೆ ಜೀವ ವಿಜ್ನಾನದ ಪ್ರಪಂಚದಲ್ಲಿ ಅದನ್ನು ಹೊಲಸೆಂದಾಗಲೀ, ಅಶುದ್ದವೆಂದಾಗಲಿ … Continue readingಮುಟ್ಟಿನ ಬಗೆಗಿನ ಕಟ್ಟುಕತೆಗಳು

ಹೆಣ್ಣುಮಕ್ಕಳ ಮುಟ್ಟಿನ ಚಕ್ರ ಸರಣಿ – ಭಾಗ 1 – ಜೀವ ವಿಜ್ಞಾನ

ಹೆಣ್ಣುಮಕ್ಕಳ ದೇಹದ ಸಂತಾನೋತ್ಪತ್ತಿ ವ್ಯವಸ್ಥೆಯ (ಮಕ್ಕಳ ಹೆರುವ ಏರ್ಪಾಟು) ಭಾಗವಾಗಿರುವ ಅಂಗಗಳಲ್ಲಿ, ಪದೇಪದೇ ನಡೆಯುವ ಎಲ್ಲ ಜೈವಿಕ ಬದಲಾವಣೆಗಳು ಮುಟ್ಟಿನಚಕ್ರದಲ್ಲಿ ಸೇರುತ್ತವೆ. ಇದು ಅಂಡಾಶಯ (ತತ್ತಿಚೀಲ), ಗರ್ಭಾಶಯ (ಬಸಿರುಚೀಲ), ಬಸಿರು ಕಂಠ ಮತ್ತು ಯೋನಿಯಂತಹ ಸಂತಾನೋತ್ಪತ್ತಿ ಮಾಡುವ (ಹೆರುವ) ಅಂಗಗಳನ್ನು ಹೊಂದಿರುವವರಲ್ಲಿ ಸಹಜವಾಗಿ ಕಂಡುಬರುತ್ತದೆ. ಪ್ರತಿ ತಿಂಗಳು, ತತ್ತಿಚೀಲವು ಹೊಸಜೀವವೊಂದನ್ನು ಹುಟ್ಟಿಸಬಲ್ಲ ಅಂಡಾಣು ಅಥವಾ ತತ್ತಿಗಳೆಂಬ ಕೋಶಗಳನ್ನು ಉತ್ಪತ್ತಿ ಮಾಡುತ್ತದೆ, ಅವು ಗಂಡು ಹೆಣ್ಣು ಕೂಡಿಕೆಯ ಸಮಯದಲ್ಲಿ ಹೆಣ್ಣಿನ ಜನನಾಂಗದ ನಾಳದ ಮೂಲಕ ಒಳಬರುವ ಗಂಡುಬಿತ್ತುಗಳೊಂದಿಗೆ (ವೀರ್ಯ) … Continue reading “ಹೆಣ್ಣುಮಕ್ಕಳ ಮುಟ್ಟಿನ ಚಕ್ರ ಸರಣಿ – ಭಾಗ 1 – ಜೀವ ವಿಜ್ಞಾನ”

ಮದ್ಯ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್ಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಿಲ್ಲ

ಕೋವಿಡ್-೧೯ನ ಈ ಕಾಲದಲ್ಲಿ ಮದ್ಯ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್ಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಅಮೆರಿಕಾದ ಸಿ ಡಿ ಸಿ ಯು ನೀರು ಮತ್ತು ಸಾಬೂನು ಸಿಗದ ಕಡೆ ಇವುಗಳನ್ನು ಉಪಯೋಗಿಸುವಂತೆ ಸೂಚಿಸಿದೆ. ಹೆಚ್ಚಿನ ಮದ್ಯ ಆಧಾರಿತ ಸ್ಯಾನಿಟೈಸರ್ಗಳು ಐಸೋಪ್ರೊಪೈಲ್ ಆಲ್ಕೋಹಾಲ್ ಅಥವಾ ಈಥೈಲ್ ಆಲ್ಕೋಹಾಲ್ ಹೊಂದಿರುತ್ತವೆ.  ಮದ್ಯವು ಬ್ಯಾಕ್ಟೀರಿಯಾಗಳ ಜೀವಕೋಶದ ಹೊರ ಪದರವನ್ನು, ಮತ್ತು ವೈರಸ್ಗಳ ಹೊದಿಕೆಯನ್ನು ನಾಶಪಡಿಸುತ್ತದೆ. ಹಾಗಾಗಿ ನಮ್ಮ ಚರ್ಮ ಅಥವಾ ಇನ್ಯಾವುದಾದರೋ ಮೇಲ್ಮೈಯ ಮೇಲೆ ಮದ್ಯವನ್ನು ಸಿಂಪಡಿಸಿದರೆ ಈ ಕೀಟಾಣುಗಳು ನಾಶವಾಗುತ್ತವೆ. ಅದಕ್ಕೆಂದೇ … Continue reading “ಮದ್ಯ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್ಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಿಲ್ಲ”

ರೋಗನಿರೋಧಕ ಶಕ್ತಿಯೆಂದರೇನು?

ರೋಗನಿರೋಧಕ ಶಕ್ತಿಯು, ಹೆಸರೇ ಸೂಚಿಸುವಂತೆ, ಹೊರಗಿನ ರೋಗಾಣುಗಳಿಂದ ನಮ್ಮನ್ನು ಕಾಪಾಡುವ ವ್ಯವಸ್ಥೆ. ನಮ್ಮ ದೇಹದಲ್ಲಿರುವ ಕೋಶಗಳು ಮತ್ತು ಅಣುಗಳು ನಮಗೆ ಈ ಸುರಕ್ಷಾ ಕವಚವನ್ನು ನೀಡುತ್ತವೆ. ಇವು ಹೊರಗಿನಿಂದ ದೇಹದೊಳಗೆ ಬಂದಿರುವ ಯಾವುದೇ ಜೀವಾಣು ಅಥವಾ ಕಣಗಳ ವಿರುದ್ಧ ಹೋರಾಡುತ್ತವೆ. ರೋಗನಿರೋಧಕ ಕೋಶಗಳಲ್ಲಿರುವ ಕಣಗಳು ಪರೋಪಜೀವಿಗಳ ಮೇಲಿರುವ ಕಣಗಳಿಗೆ ಅಂಟಿಕೊಂಡು ಅವುಗಳು ನಮಗೆ ಸೋಂಕು ಉಂಟುಮಾಡುವ ಸಾಧ್ಯತೆಯನ್ನು ತಪ್ಪಿಸುತ್ತವೆ. ಹೀಗೆ ಬೆಳೆಯುವ ರೋಗನಿರೋಧಕ ಶಕ್ತಿಯು ಇಂತಹ ಪರೋಪಜೀವಿಗಳಿಂದ ನಮನ್ನು ಬಹುಸಮಯದವರೆಗೆ ರಕ್ಷಿಸುತ್ತವೆ. ಪ್ರಾಣಿಗಳಲ್ಲಿ ಹಾಗೂ ಸಸ್ಯಗಳಲ್ಲಿ ಹಲವು … Continue reading “ರೋಗನಿರೋಧಕ ಶಕ್ತಿಯೆಂದರೇನು?”

ಸೊಳ್ಳೆಗಳು ಕೊರೊನ ವೈರಸ್ ಹರಡುವುದಿಲ್ಲ

ಕೊರೊನ ವೈರಸ್ ಅಥವಾ ಎನ್-ಸಿಒವಿಐಡಿ ೧೯ ಮನುಷ್ಯ ದೇಹದ ಉಸಿರಾಟದ ವ್ಯವಸ್ಥೆಯ ಮೇಲೆ ಪ್ರಭಾವ ಬೀರುವ ಸೋಂಕಾಗಿದೆ. ಸೊಳ್ಳೆಗಳು ಡೆಂಗೆ ಮತ್ತು ಚಿಕನ್‍ಗುನ್ಯದಂತಹ ಹಲವು ರೋಗಗಳನ್ನು ಹರಡುತ್ತವೆಯಾದರೂ ಅವು ಕೊರೊನ ವೈರಸ್ ಅನ್ನು ಹರಡುವುದಿಲ್ಲ. ಕೊರೊನ ಸೋಂಕು ತಗುಲಿದ ವ್ಯಕ್ತಿಯನ್ನು ಕಡಿಯುವ ಸೊಳ್ಳೆಗಳಿಗೆ ಅದನ್ನು ಹೊಂದಿ ಬೇರೆ ಪ್ರಾಣಿಗಳಿಗೆ ಅಥವಾ ಮನುಷ್ಯರಿಗೆ ಹರಡುವ ಸಾಮರ್ಥ್ಯವಿಲ್ಲ. ಕೊರೊನ ವೈರಸ್ ಸೋಂಕು ತಗುಲಿದವರ ಸಿಂಬಳ, ಎಂಜಲು, ಅಥವಾ ಕೆಮ್ಮು ಮತ್ತು ಸೀನಿನಿಂದ ಹನಿಗಳ ರೂಪದಲ್ಲಿ ಹರಡುತ್ತದೆ. ಸೊಳ್ಳೆಗಳಿಂದ ಈ ವೈರಸ್ … Continue reading “ಸೊಳ್ಳೆಗಳು ಕೊರೊನ ವೈರಸ್ ಹರಡುವುದಿಲ್ಲ”

ವೈರಸ್: ಏನಿದು?

ವೈರಸ್ (ವೈರಾಣು) ಒಂದು ಸಣ್ಣ ನಿರ್ಜೀವ ಜೀವಿ. ಇದು ಬ್ಯಾಕ್ಟೀರಿಯ, ಸಸ್ಯಗಳು ಹಾಗೂ ಪ್ರಾಣಿಗಳಿಗೆ ಸೋಂಕಾಗಿ ತಗುಲಬಹುದು. ಈ ಮೂಲಕ ಹಲವು ರೋಗಗಳನ್ನು ಉಂಟುಮಾಡಬಹುದು ಮತ್ತು ಕೆಲವೊಮ್ಮೆ ಈ ಜೀವಿಗಳ ಸಾವಿಗೂ ಕಾರಣವಾಗಬಹುದು. ವೈರಸ್‍ಗಳೊಳಗೆ ಮನುಷ್ಯ ಶರೀರದಲ್ಲಿರುವಂತೆ ಜೀವಕೋಶಗಳಿರುವುದಿಲ್ಲ. ಹೀಗಾಗಿ ಅವುಗಳ ಬೆಳವಣಿಗೆಗೆ ಅವು ಪೋಷಕ ಜೀವಕೋಶವೊಂದನ್ನು ಹುಡುಕಿಕೊಳ್ಳಬೇಕು. ಬಹುತೇಕ ವೈರಸ್‍ಗಳು ಈ ಮೂರು ಭಾಗಗಳನ್ನು ಹೊಂದಿರುತ್ತವೆ – ವೈರಸ್‍ನ ಕುರಿತು ಮಾಹಿತಿ ಹೊಂದಿರುವ ಒಂದು ರಾಸಾಯನಿಕ ರಚನೆ, ರಕ್ಷಾ ಸುತ್ತುವರಿ ಮತ್ತು ಹೊರಪದರ. ಜೀವಿಗಳಿಗಿಂತ ಇದು … Continue reading “ವೈರಸ್: ಏನಿದು?”


Get new content delivered directly to your inbox.

%d bloggers like this: